ಧಾರವಾಡ ಲೋಕಸಭಾ ಕ್ಷೇತ್ರ ಕ್ರಮೇಣ ರಣರಂಗವಾಗುತ್ತಿದೆ. ಪ್ರಲ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ಬಳಿಕ, ಒಬ್ಬೊಬ್ಬರಾಗಿ ಮುಖಂಡರು ಪ್ರಲ್ಲಾದ ಜೋಶಿ ಮೇಲೆ ಮುಗಿ ಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿಯವರ ಮೇಲೆ ಆರೋಪಗಳ ಮೇಲೆ ಆರೋಪಗಳು ಕೇಳಿ ಬರುತ್ತಿವೆ.
ಲಿಂಗಾಯತರು ಕಟ್ಟಿದ ಸಂಸ್ಥೆಯನ್ನು ಕಸಿದುಕೊಂಡ ಜೋಶಿ
ಹೀಗೆ ಗಂಭೀರ ಆರೋಪ ಮಾಡಿದವರು ಮಾಜಿ ಸಚಿವ ವಿನಯ ಕುಲಕರ್ಣಿಯವರು. ಖಾಸಗಿ ಚಾನೆಲ್ ಗೆ ಸಂದರ್ಶನ ನೀಡಿರುವ ವಿನಯ ಕುಲಕರ್ಣಿ, ಲಿಂಗಾಯತರು ಕಟ್ಟಿ ಬೆಳೆಸಿದ್ದ, ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯನ್ನು ಜೋಶಿಯವರು ಕಿತ್ತುಕೊಂಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಸಂಸ್ಥೆಯನ್ನು ಕಟ್ಟಿದ ನೀರಲಕಟ್ಟಿಯವರ ಮೇಲೆ ಸಿ ಬಿ ಐ ದಾಳಿ ನಡೆಸಿ ಚಿತ್ರಹಿಂಸೆ ನೀಡಿದರು ಎಂದು ವಿನಯ ಆರೋಪಿಸಿದ್ದಾರೆ.
ಆ ಚಿತ್ರಹಿಂಸೆಗೆ ನೀರಲಕಟ್ಟಿಯವರಿಗೆ ಹೃದಯಾಘಾತವಾಗಿ ಅವರು ಸಾವನ್ನಪ್ಪಬೇಕಾಯಿತು ಎಂದು ಆರೋಪಿಸಿದ್ದಾರೆ. ಸಂದರ್ಶನ ಉದ್ದಕ್ಕೂ ಜೋಶಿಯವರ ಮೇಲೆ ಆರೋಪಗಳ ಸುಳಿಮರೆಗೈದ ವಿನಯ, ಈ ಸಲ ಬದಲಾವಣೆ ಮಾಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.