ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಇಂದು ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಹಿಂಬದಿಯಿರುವ Hebich Memorial church ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕ್ರೈಸ್ತ ಧರ್ಮಿಯರು ವಿನೋದ ಅಸೂಟಿ ಗೆಲುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚರ್ಚಿನ ಫಾಸ್ಟರ್ ಸ್ಯಾಮುಯೆಲ್ ಕ್ಯಾಲ್ವಿನ್, ನಾಗರಾಜ ಗೌರಿ, ಚರ್ಚ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹುಗ್ಗಿ, ಆನಂದ ಹಳ್ಳಿ ರಾಜೀವ ನೆಗಲೂರ, ಸ್ಟ್ಯಾನ್ಲಿ ಗುಂಡಿ, ನೋಯೆಲ್ ಕೌಡ್ಲರ್, ವಸಂತ ನಾಯ್ಕರ, ಕ್ರೈಸ್ತ ಧರ್ಮದ ಹಿರಿಯ ಮುಖಂಡರು, ಅನುಯಾಯಿಗಳು, ಪಕ್ಷದ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.