ಉಣಕಲ್ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ದೊಡ್ಡ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ. ಸತ್ತ ಮೀನುಗಳು ದುರ್ನಾತ ಬೀರುತ್ತಿದ್ದುದರಿಂದ ವಾಯು ವಿಹಾರಿಗಳು ಈ ವಿಷಯವನ್ನು ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಮೀನುಗಳ ದಿಢೀರ್ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣವೆಂಬುದು ಮೇಲ್ನೋಟಕ್ಕೆ ತಿಳಿದುಬಂದರು, ಬಿಸಿಲಿನ ಝಳ ಜಾಸ್ತಿಯಾಗಿದ್ದು, ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇದಲ್ಲದೇ ಬಿಸಿಲಿನ ತಾಪಮಾನ ಹೆಚ್ಚಳದಿಂದ ಕೆರೆಯ ತಳಭಾಗದಲ್ಲಿರುವ ಪಾಚಿ ಮೇಲ್ಭಾಗಕ್ಕೆ ಬಂದು ಆಮ್ಲಜನಕವನ್ನು ಹೀರಿ ಕೊಳ್ಳುತ್ತಿದೆ. ಹೀಗಾಗಿ, ಮೀನುಗಳಿಗೆ ಆಮ್ಲಜನಕದ ಅಭಾವ ಉಂಟಾಗಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ.
ಅಲ್ಲದೆ ಉಣಕಲ ಕೆರೆಗೆ ಕೊಳಚೆ ನೀರಿನ ಬಂದು ಸೇರಿಕೊಳ್ಳುತ್ತಿರುವದರಿಂದ ನೀರು ಕಲುಷಿತಗೊಳ್ಳುವದರಿಂದ ಸಹ ಮೀನುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇಷ್ಟಾದರು ಸಹ ಪಾಲಿಕೆ ಅಧಿಕಾರಿಗಳು ಕೆರೆಗೆ ಬರದೇ ಇರೋದಕ್ಕೆ, ಬಿಜೆಪಿ ಮುಖಂಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.