ನಾಡಿನ ಏಕೈಕ ಮರಾಠಾ ಸಚಿವ ಸಂತೋಷ ಲಾಡ್ ರನ್ನು ” ನಾಲಾಯಕ ” ಎಂದು ಸಂಭೋಧಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮರಾಠಾ ಸಮುದಾಯ ಆಕ್ರೋಶಗೊಂಡಿದೆ.
ಬಿ ವೈ ವಿಜಯೇಂದ್ರ ಮಾತಿನಿಂದ ಸಿಟ್ಟಾಗಿರುವ ಮರಾಠಿಗರು, ಮಿಸ್ಟರ್, ವಿಜಯೇಂದ್ರ ನಾವು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇವೆ. ನಮ್ಮ ಸಮಾಜದ ನಾಯಕನಿಗೆ ” ನಾಲಾಯಕ ” ಎಂದು ಕರೆಯುವ ಮಟ್ಟಕ್ಕೆ ಹೋಗಿರುವ ತಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ.
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯ ” ನಾಲಾಯಕ ” ಯಾರು ” ನಾಯಕ ” ಯಾರು ಅನ್ನೋದನ್ನು ಮರಾಠಿಗರು ತೋರಿಸುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ, ಬಿಜೆಪಿ ಬೆನ್ನಿಗೆ ನಿಂತಿರುವ ಮರಾಠಾ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ಬಿಜೆಪಿಯಲ್ಲಿ ನಡೆದಿದೆ ಎಂದು ಮುಖಂಡರು ಅರೋಪಿಸಿದ್ದಾರೆ.