ಧಾರವಾಡ ಲೋಕಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು ಸುಮಾರು 18 ಲಕ್ಷ ಜನ ಮತದಾನದ ಹಕ್ಕನ್ನು ಹೊಂದಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೇಸ್ ಹಾಗೂ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಬಿರುಸಿನಿಂದ ನಡೆಸಿದ್ದಾರೆ. ಪ್ರಖರ ಬಿಸಿಲು, ಪ್ರಚಾರಕ್ಕೆ ಸ್ವಲ್ಪ ತಡೆಯೋಡ್ಡಿದರು ಸಹ, ಚುನಾವಣೆಗೆ ನಿಂತವರು ಬೆವರು ಸುರಿಸುವದು ಅನಿವಾರ್ಯವಾಗಿದೆ.
ಬೇಸಿಗೆ ರಜೆ ಎಂಬಂತೆ ಅಭ್ಯರ್ಥಿಗಳು ಬೆಳಿಗ್ಗೆ ನಾಲ್ಕು ತಾಸು ಸಂಜೆ ನಾಲ್ಕು ತಾಸು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಒಳಹೊಡೆತ ಜಾಸ್ತಿ
ಕರ್ನಾಟಕ ಫೈಲ್ಸ್ ತಂಡ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರನ್ನು ಭೇಟಿ ಮಾಡುತ್ತಿದ್ದು, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಆದರೆ ಮತದಾರ ಮಾತ್ರ ಜಾಣನಡೆ ಇಟ್ಟಿರುವದು ಕಂಡು ಬಂದಿದೆ.
ಸಧ್ಯ ಕೇಂದ್ರ ಸಚಿವರಾಗಿರುವ ಪ್ರಲ್ಲಾದ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ವಿನೋದ ಅಸೂಟಿ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದಾರೆ. ಈ ಸಲದ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಕ್ಕೆ ಪ್ರತಿಷ್ಟೆಯ ಕಣವಾಗಿದೆ. ಇಬ್ಬರು ಅಭ್ಯರ್ಥಿಗಳು ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.
ಕ್ಷೇತ್ರದ ಜನ ಈ ಸಲದ ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿದೆ. ಕಟ್ಟೆ ಮೇಲೆ, ಮರದ ಕೆಳಗೆ, ಹೋಟೆಲ್ ನಲ್ಲಿ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದು, ಅವರದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ನವಲಗುಂದ, ಧಾರವಾಡ ಗ್ರಾಮೀಣ, ಕಲಘಟಗಿ, ಕುಂದಗೋಳ ಸೇರಿದಂತೆ ಹುಬ್ಬಳ್ಳಿ ಧಾರವಾಡ ನಗರ ಕ್ಷೇತ್ರಗಳಲ್ಲಿ ಮತದಾರ ಬಹಿರಂಗವಾಗಿ ಬಾಯಿ ಬಿಡುತ್ತಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದ ಒಳನೋಟ ನೋಡಲು ಹೋದಾಗ ಕಂಡಿದ್ದು ಈ ಸಲದ ಚುನಾವಣೆಯಲ್ಲಿ ಒಳಹೊಡೆತ ಜಾಸ್ತಿ ಇದೆ ಅನ್ನೋದು ಗೊತ್ತಾಗಿದೆ.
ಮೊದಲ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಎಮ್ ಪಿ ಚುನಾವಣೆ ನಡೆದಿದೆ ಅನ್ನೋವಷ್ಟರ ಮಟ್ಟಿಗೆ ಈ ಸಲದ ಚುನಾವಣೆ ಸದ್ದು ಮಾಡಿದೆ. ಕ್ಷೇತ್ರದಲ್ಲಿ ಅಂಡರ ಕರೆಂಟ್ ಮತದಾರರು ಜಾಸ್ತಿ ಇದ್ದಾರೆ. ಪ್ರತಿ ಸಲದ ಚುನಾವಣೆಯಲ್ಲಿ ಕಡ್ಡಿ ಮುರಿದಂತೆ ಹೇಳುತ್ತಿದ್ದ ಮತದಾರರು, ಸ್ವಲ್ಪವು ಗುಟ್ಟು ಬಿಟ್ಟು ಕೊಡುತ್ತಿಲ್ಲ. ” ಯೇ ಹೋಗ್ರಿ, ಈ ಸಲ ಎನ್ ಮಾಡಬೇಕ್ ಅನ್ನೋದು ಗೊತ್ತೈತಿ ಅಂತಿದ್ದಾರೆ.