ಲೋಕಸಭೆ ಚುನಾವಣಾ ಪ್ರಚಾರದಲ್ಲಿದ್ದ ವೇಳೆ ಹೈವೇ ಮ್ಯಾನ್ ಎಂದೆ ಖ್ಯಾತಿ ಗಳಿಸಿರುವ ನಿತಿನ್ ಗಡ್ಕರಿ ಇಂದು ಹಠಾತ್ ಪ್ರಜ್ಞೆ ತಪ್ಪಿದ ಘಟನೆ ಮಹಾರಾಷ್ಟ್ರದ ಯವತ್ಮಾಲ್ ನಡೆದಿದೆ. ಭಾಷಣ ಮಾಡುತ್ತಿದ್ದಂತೆ ನಿತಿನ್ ಗಡ್ಕರಿ ನೆಲಕ್ಕೆ ಕುಸಿದು ಬೀಳುತ್ತಿದ್ದರು. ಅಷ್ಟರಲ್ಲಿ ಪಕ್ಕದಲ್ಲಿದ್ದ ಅಂಗರಕ್ಷಕರು ತಕ್ಷಣ ಸಹಾಯಕ್ಕೆ ಬಂದರು.
ಕೂಡಲೇ ಅವರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಧಾಖಲು ಮಾಡಲಾಯಿತು. ಸತತ ಓಡಾಟದಿಂದ ಸ್ವಲ್ಪ್ ಮಟ್ಟದ ಆಯಾಸವಾಗಿತ್ತು. ಇದೀಗ ಆರೋಗ್ಯ ಸರಿಯಾಗಿದ್ದು, ನಿತಿನ್ ಗಡ್ಕರಿ ಮತ್ತೆ ಪ್ರಚಾರದಲ್ಲಿ ತೊಡಗಿದ್ದಾರೆ.