ಭಾವೈಕ್ಯತೆಯ ಮಠ ಎಂದೆ ಹೆಸರಾದ, ನಾಡಿನ ಪ್ರಮುಖ ಮಠಗಳಲ್ಲಿ ಒಂದಾದ ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿಯವರನ್ನು ಧಾರವಾಡ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಭೇಟಿಯಾಗಿ ಆಶೀರ್ವಾದ ಪಡೆದರು.
ಜಗದ್ಗುರು ಫಕೀರ ಸಿದ್ದರಾಮ ಶ್ರೀಗಳ ಪಾದಕ್ಕೆರಗಿ ಭಕ್ತಿ ಸಮರ್ಪಿಸಿದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ, ಆಶೀರ್ವದಿಸುವಂತೆ ಪ್ರಾರ್ಥಿಸಿದರು. ವಿನೋದ ಅಸೂಟಿಯವರಿಗೆ ಸನ್ಮಾನ ಮಾಡುವ ಮೂಲಕ ಪ್ರಸಾದ ನೀಡಿದ ಜಗದ್ಗುರು ಫಕೀರ ಸಿದ್ದರಾಮ ಶ್ರೀಗಳು, ನಿನಗೆ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಮ್ ಎಸ್ ಅಕ್ಕಿ, ಎ ಪಿ ಎಮ್ ಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡರು, ಹಜರತ ಅಲಿ ಜೋಡಮನಿ, ಮುಖಂಡರಾದ ಶಿವಾನಂದ ಬೆಂತೂರ, ಶ್ರೀಕಂಠ, ಮುತ್ತಣ್ಣ ಹಿರೇಗೌಡರ, ಜಗದೀಶ ಉಪ್ಪಿನ, ಸಲೀಮ್ ಕ್ಯಾಲಕೊಂಡ, ಪ್ರಭುಗೌಡ ಶಂಕಾಗೌಡಶಾನಿ, ಹುಸೇನ್ ಹುಬ್ಬಳ್ಳಿ, ರಮೇಶ ಕೊಪ್ಪದ, ಅಪ್ಪಣ್ಣ ಹಿರೇಗೌಡರ, ನೆಹರು ಪಾಟೀಲ, ಸಿದ್ದಲಿಂಗಪ್ಪ ಹಾದಿಮನಿ, ಸೋಮಣ್ಣ ಕುನ್ನೂರ, ಶಿವಾನಂದ ನವಲಗುಂದ, ಮಹಾಬಳೇಶ ಯರನಾಳ, ಮಂಜುನಾಥ ಸೇತ ಸನದಿ, ಬಸಣ್ಣ ಇಂಗಳಗಿ, ನಾಗಣ್ಣ ಕರೆನ್ನವರ, ಆಸೀಫ್ ಸಾವಂತನವರ, ಪರಸಣ್ಣ ಹರಿಜನ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.