ರಾಜ್ಯ ಕಾಂಗ್ರೇಸ್ ಸರ್ಕಾರದ ಬುದ್ದಿವಂತ ಮಂತ್ರಿ ಸಂತೋಷ ಲಾಡ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿಭಿನ್ನ ಪ್ರಚಾರ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಹೇಳಲು ಸಂತೋಷ ಲಾಡ್, ಜನನಿಬಿಡ ರಸ್ತೆಯಲ್ಲಿ ನಿಂತು ಜಾಗ್ರತಿ ಮೂಡಿಸಿದರು.
1947 ರಿಂದ 2014 ರ ವರೆಗೆ 14 ಪ್ರಧಾನಮಂತ್ರಿಗಳು ಮಾಡಿದ ಸಾಲ ಒಟ್ಟು 55 ಕೋಟಿಯಾಗಿತ್ತು. 2014 ರಿಂದ 2024 ರವರೆಗೆ 10 ವರ್ಷಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸಾಲ 168.72 ಕೋಟಿ ಸಾಲ ಮಾಡಿದ್ದಾರೆ. ಈ ಸಾಲಕ್ಕೆ ಹೊಣೆ ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಧಾರವಾಡದ ಸುಬಾಷ ರಸ್ತೆ ಸೇರಿದಂತೆ ಜನನಿಬೀಡ ರಸ್ತೆಯಲ್ಲಿ ನಿಂತು ಕೈಯಲ್ಲಿ ಫಲಕ ಹಿಡಿದು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.
