ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣದಲ್ಲಿ ತನಿಖೆಗೆ ಅಗತ್ಯ ಸಹಕಾರ ಕೊಟ್ಟು, ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವದನ್ನು ಬಿಟ್ಟು, ಪ್ರಲ್ಲಾದ ಜೋಶಿ, ನೇಹಾ ಕೊಲೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿ ಎಮ್ ಇಬ್ರಾಹಿಂ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಎಮ್ ಇಬ್ರಾಹಿಂ, ಹುಬ್ಬಳ್ಳಿ ಫಯಾಜ್ ಬಗ್ಗೆ ಮಾತಾಡೋ ಜೋಶಿ, ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದ್ರು.
ಹುಬ್ಬಳ್ಳಿ ಫಯಾಜ್ ಕೈಯಲ್ಲಿ ಒಂದು ಕೊಲೆಯಾಗಿದೆ. ಪ್ರಜ್ವಲ್ ರೇವಣ್ಣ 600 ಹೆಣ್ಮಕ್ಳಳ ಶೀಲ, ಹರಾಜು ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳುವದಕ್ಕೆ, ಸಿ ಎಮ್ ಇಬ್ರಾಹಿಂ ಆಕ್ಷೇಪ ವ್ಯಾಕ್ತಪಡಿಸಿದ್ರು.