ಕಳಸಾ ಬಂಡೋರಿ ಹಾಗೂ ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠರಿಗೆ ಜೀವ ಬೆದರಿಕೆ ಹಾಕಲಾಗಿದೆ. ಅವರ ವಿಳಾಸಕ್ಕೆ ಪತ್ರವೊಂದು ಬಂದಿದ್ದು, ಮಹಾದಾಯಿ ಹೋರಾಟ ಮಾಡಿಕೊಂಡು ಸುಮ್ಮನಿರು ಇಲ್ಲಾ ಅಂದ್ರೆ ನಿನ್ನ ಸಾವು ನನ್ನ ಕೈಯಲ್ಲಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ.
ಬೆದರಿಕೆ ಪತ್ರಕ್ಕೆ ಸಂಬಂದಿಸಿದಂತೆ ವಿರೇಶ ಸೊಬರದಮಠ ಅವರು ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೊಬರದಮಠರಿಗೆ ಈ ಹಿಂದೇಯೂ ಕೊಲೆ ಬೆದರಿಕೆ ಬಂದಿತ್ತು. ಆಗ ಸರ್ಕಾರ ಗನ್ ಮ್ಯಾನ್ ಕೊಟ್ಟಿತ್ತು.