ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು, ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಹರಿಹರ ಬಳಿ ನಡೆದಿದೆ.
ದಾವಣಗೆರೆ ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು ಬರುತ್ತಿದ್ದಾಗ ಬೈಕ ಸವಾರ ರಸ್ತೆ ಅಪಘಾತದಿಂದ ಕೆಳಕ್ಕೆ ಬಿದ್ದಿದ್ದ, ಇದನ್ನು ಗಮನಿಸಿದ ವಿನಯ ಕುಲಕರ್ಣಿ, ತಕ್ಷಣ ಕಾರು ನಿಲ್ಲಿಸಿ, ಗಾಯಾಳುವನ್ನು ಆಸ್ಪತ್ರೆಗೆ ಧಾಖಲಿಸಿದ್ದಾರೆ. ವೈದ್ಯರಿಗೆ ಕರೆ ಮಾಡಿ ಮಾತನಾಡಿದ ವಿನಯ, ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ.