ಆರ್ ಟಿ ಐ ಅಡಿ ಕೇಳಿದ ಮಾಹಿತಿಯ ವಿವರಗಳನ್ನು ಕ್ರೂಡಿಕರಿಸುವಲ್ಲಿ ಸಮಸ್ಯೆಯಾಗುತ್ತಿದೆ ಎಂದು ಹೇಳುವಂತಿಲ್ಲ ಎಂದು ದೆಹಲಿ ಹೈಕೋರ್ಟ ಎಚ್ಚರಿಸಿದೆ.
ಖಾಸಗಿಯಾಗಿ ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಪ್ರಭ್‌ಜೋತ್ ಸಿಂಗ್ ಧಿಲ್ಲೋನ್ ಅವರಿಗೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಈ ಹಿಂದೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರ್ ಟಿ ಐ ಅಡಿ ಕೇಳಿದ ಮಾಹಿತಿ ನೀಡಬೇಕು ಎಂದು ಎಚ್ಚರಿಸಿರುವ ದೆಹಲಿ ಹೈಕೋರ್ಟ, ಮಾಹಿತಿ ಲಭ್ಯವಾಗಿರದಿದ್ದರು, ಕೇಳಿದ ಮಾಹಿತಿಯನ್ನು ಕ್ರೂಡಿಕರಿಸಿ ಕೊಡಬೇಕೆಂದು ಹೇಳಿದೆ.