ರಾಜ್ಯದ ಗಮನ ಸೆಳೆದಿದ್ದ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದು ಹೋಗಿದೆ. ಬಿಜೆಪಿ ಹಾಗೂ ಕಾಂಗ್ರೇಸ್ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಲೀಡ್ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕ್ಷೇತ್ರದ ಮತದಾರರ ಜೊತೆ ಚರ್ಚೆ ನಡೆಸಿರುವ ಅಭ್ಯರ್ಥಿಗಳು ಮತಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದೆ. ಇದೇ ಮೊದಲ ಬಾರಿಗೆ ಹೋಬಳಿ ಮಟ್ಟಕ್ಕೆ ಹೋಗಿ ಎರಡು ಪಕ್ಷಗಳ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದಾರೆ.
ಕಾಂಗ್ರೇಸ್ ನೇತೃತ್ವದ ಇಂಡಿಯಾ ಒಕ್ಕೂಟದ ನಾಯಕರು ಈ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರೆ, ಮತ್ತೊಂದೆಡೆ ಬಿಜೆಪಿ ನಾಯಕರು ಮೋದಿ ಮತ್ತೊಮ್ಮೆ ಅಂತಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೇಸ್ ನೇತ್ರತ್ವದ ಸರ್ಕಾರ ಅಧಿಕಾರಕ್ಕೆ ಬಂದು, ಆಕಸ್ಮಾತ ವಿನೋದ ಅಸೂಟಿ ಗೆದ್ದರೆ, ವಿನೋದ ಅಸೂಟಿ ಕೇಂದ್ರದ ಮಂತ್ರಿಯಾಗ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಕೊಪ್ಪಳ ಹಾಗೂ ಧಾರವಾಡ ಕ್ಷೇತ್ರದಲ್ಲಿ ಮಾತ್ರ ಕುರುಬ ಸಮಾಜದ ಅಭ್ಯರ್ಥಿಗಳು ಕಾಂಗ್ರೇಸ್ಸಿನಿಂದ ಸ್ಪರ್ಧೆ ಮಾಡಿದ್ದಾರೆ. ಅಹಿಂದ ವರ್ಗಕ್ಕೆ ಪ್ರಾತಿನಿದ್ಯ ಕೊಡಬೇಕು ಅಂತ ಬಂದಾಗ ವಿನೋದ ಅಸೂಟಿ ಕೇಂದ್ರದ ಸಚಿವರಾಗುತ್ತಾರೆ ಅನ್ನೋ ಲೆಕ್ಕಾಚಾರ ಮಾಡಲಾಗುತ್ತಿದೆ.
ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ಬಿರುಸಿನ ಪೈಪೋಟಿ ನೀಡಿರುವ 34 ರ ಹರೆಯದ ವಿನೋದ, ತಮ್ಮ ಸರಳ ನಡವಳಿಕೆಯಿಂದಲೆ ಜನರ ಮನಸ್ಸನ್ನು ಗೆದ್ದಿದ್ದಾರೆ.