ಭಾರತ ಜೋಡೋ ಯಾತ್ರೆ, ನ್ಯಾಯ ಯಾತ್ರೆ ಮುಗಿಸಿಕೊಂಡು ಲೋಕಸಭಾ ಚುನಾವಣೆಗೆ ಧುಮುಕಿರುವ ರಾಹುಲ್ ಗಾಂಧಿ ತಮ್ಮನ್ನು ಪ್ರೀತಿಸುವವರಿಗೆ ಶುಭ ಸುದ್ದಿ ನೀಡಿದ್ದಾರೆ.
ಉತ್ತರ ಪ್ರದೇಶದ ರಾಯಬರೇಲಿಯ ಜೊತೆ ತಮ್ಮ ಕುಟುಂಬದ ಒಡನಾಟ ಸ್ಮರಿಸಿಕೊಂಡ ರಾಹುಲ್ ಗಾಂಧಿ ಅಲ್ಲಿನ ಜನರ ಜೊತೆ ಸಂವಾದ ನಡೆಸಿದ್ರು. ಇದೇ ವೇಳೆ, ಅಲ್ಲಿನ ಅಭಿಮಾನಿಯೊಬ್ಬ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ. ತಕ್ಷಣ ಉತ್ತರಿಸಿದ ರಾಹುಲ್ ಗಾಂಧಿ ಶೀಘ್ರದಲ್ಲಿ ಮದುವೆಯಾಗುವದಾಗಿ ಹೇಳಿದರು.