ವಿಜಯಪುರದಲ್ಲಿ ಇಂದು ನಡೆದ ದಾರುಣ ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮನೆ ಎದುರು ಬಂದಿದ್ದ ಒಂಟೆ ಮೇಲೆ ಕುಳಿತು ಒಂದು ಸುತ್ತು ಹಾಕಿದ್ದ ಮಕ್ಕಳು, ನಂತರ ಒಂಟೆಯ ಹಿಂದೆ ಹೋಗಿದ್ದಾರೆ. ಒಂದು ಕಿಲೋಮೀಟರ್ ಅಂತರದಲ್ಲಿರುವ ಚರಂಡಿ ಶುದ್ದಿಕರಣ ಘಟಕದ ಮುಂದೆ ಬರುತ್ತಿದ್ದಂತೆ ಕಾಲು ಜಾರಿ ಬಿದ್ದಿದ್ದಾರೆ.
ಹೊರಗೆ ಆಟ ಆಡಲು ಹೋದ ಮಕ್ಕಳು ಒಂದು ದಿನ ಗತಿಸಿದರು, ವಾಪಸ ಬರದೇ ಇದ್ದಾಗ ಆತಂಕಗೊಂಡ ಪಾಲಕರು ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಇಂದು ಮೂವರು ಮಕ್ಕಳ ಶವಗಳು ತೇಲಾಡುವ ದೃಶ್ಯ ನೋಡಿದ ಜನ, ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಕ್ಕಳನ್ನು ಹತ್ತು ವರ್ಷದ ಅನುಷ್ಕಾ, ಎಂಟು ವರ್ಷದ ವಿಜಯ, ಏಳು ವರ್ಷದ ಮಿಹರ್ ಎಂದು ಗುರುತಿಸಲಾಗಿದೆ.