ಭಾರತ ಬಿಟ್ಟು ಬೇರೆಡೆ ನೆಲೆಸಿರುವ ನಿತ್ಯಾನಂದ ಸ್ವಾಮಿ, ಇದೀಗ ಕೈಲಾಸ ದೇಶಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಕೈಲಾಸ ದೇಶ ರಚಿಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ, ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಬೇಕಿದ್ದು, ಹೊಸ ಯುಗ ಆರಂಭಿಸಲು ದೇಣಿಗೆ ನೀಡಿವಂತೆ ಮನವಿ ಮಾಡಿದ್ದಾರೆ.
ಹಿಂದೂ ಪರಂಪರೆಯ ಸಾರವನ್ನು ಮುಂದುವರೆಸುವ ಜವಾಬ್ದಾರಿಯನ್ನು ಕೈಲಾಸ ಮುನ್ನೇಡೆಸುತ್ತಿದ್ದು, ನೀವೆಲ್ಲ ಇದರ ಭಾಗವಾಗಿರಿ ಎಂದು ಹೇಳಿದ್ದಾರೆ.