ಉತ್ತರ ಪ್ರದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ರಾಮಮಂದಿರ ನೆಲಸಮ ಮಾಡುತ್ತಾರೆ ಎಂದಿರುವ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪಂಚ್ ಕೊಟ್ಟಿದ್ದಾರೆ.
ಕಾಂಗ್ರೇಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ತಕ್ಷಣ ಅಪೂರ್ಣಗೊಂಡ ರಾಮಮಂದಿರವನ್ನು ಪೂರ್ಣಗೊಳಿಸುವದಾಗಿ ಹೇಳಿದ್ದಾರೆ. ಮೋದಿಯವರು ಚುನಾವಣೆ ಸಲುವಾಗಿ ರಾಮಮಂದಿರ ಅಪೂರ್ಣಗೊಳಿಸಿದ್ದಾರೆ. ನಾವು ಅದನ್ನು ಪೂರ್ಣ ಮಾಡುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.