ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಧಾರವಾಡದ ಹಿರಿಯ ಕಾಂಗ್ರೇಸ್ ಮುಖಂಡ ರಾಬರ್ಟ ದದ್ದಾಪುರಿಯವರಿಗೆ ಕ್ರೈಸ್ತ್ ಸನ್ಯಾಸಿಯರು ಸನ್ಮಾನ ಮಾಡಿದರು. ರಾಬರ್ಟ ದದ್ದಾಪುರಿ ಕಳೆದ 40 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ರಾಬರ್ಟ್ ಹೆಸ್ಕಾಂ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಬೆಳಗಾವಿ ವಿಭಾಗದಲ್ಲಿ ಕ್ರೈಸ್ತ್ ಸಮುದಾಯದ ಮುಖಂಡನನ್ನು ಗುರುತಿಸಿ ಪ್ರಮುಖ ಹುದ್ದೆ ನೀಡಿದ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಪಿ ಸಿ ಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಕ್ರೈಸ್ತ್ ಸಮುದಾಯದ ಪರವಾಗಿ ಸನ್ಯಾಸಿಯರು ಅಭಿನಂದನೆ ಸಲ್ಲಿಸಿದರು.
