ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಬೆನ್ನಿಗೆ ನಿಂತಿದ್ದ ಮುಸ್ಲಿಮ್ ಸಮುದಾಯವನ್ನು, ಸಮುದಾಯದ ಮುಖಂಡರನ್ನು ಕಾಂಗ್ರೇಸ್ ಪಕ್ಷ ಕಡೆಗಣಿಸಿದೆ.
ಉತ್ತರ ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿದ್ಯ ಕೊಡದೆ ಇರುವದು ಮುಸ್ಲಿಮ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಜೂನ್ ತಿಂಗಳಲ್ಲಿ ಕರ್ನಾಟಕ ವಿಧಾನ ಪರಿಷತ್ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ನಿವೃತ್ತಿಯಿಂದ ತೆರವಾಗಲಿರುವ 11 ಸ್ಥಾನಗಳಿಗೆ ಜೂನ್ 13 ಮತದಾನ ನಡೆಯಲಿದೆ.
ನಿವೃತ್ತಿಯಾಗಲಿರುವವರ ಪಟ್ಟಿ
ಅರವಿಂದ ಅರಳಿ, ಎನ್.ಎಸ್.ಬೋಸರಾಜ್, ಕೆ.ಗೋವಿಂದರಾಜ್, ಡಾ.ತೇಜಶ್ವಿನಿ ಗೌಡಪಿ.ಎಂ.ಮುನಿರಾಜುಗೌಡ, ಕೆ.ಪಿ.ನಂಜುಂಡಿ, ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿ ಕುಮಾರ್, ಎಸ್.ರುದ್ರೇಗೌಡ, ಎಚ್.ಹರೀಶ್ ಕುಮಾರ್, . ಬಿ.ಎಂ.ಫಾರೂಕ್ ನಿವೃತ್ತಿಯಾಗಲಿದ್ದಾರೆ.
ಈ ಸ್ಥಾನಗಳಿಗೆ ಮತ್ತೆ ಚುನಾವಣೆ ನಡೆಸಲಾಗುತ್ತಿದ್ದು, ಉತ್ತರ ಕರ್ನಾಟಕದಿಂದ ಮುಸ್ಲಿಮ್ ಸಮುದಾಯದ ಇಬ್ಬರಿಗೆ ವಿಧಾನ ಪರಿಷತನಲ್ಲಿ ಟಿಕೇಟ್ ನೀಡಬೇಕಾಗಿದೆ.
ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ ಎಮ್ ಹಿಂಡಸಗೇರಿ, ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಹುಬ್ಬಳ್ಳಿಯ ಮಾಜಿ ಅಂಜುಮನ್ ಅಧ್ಯಕ್ಷ ಯೂಸುಫ್ ಸವಣೂರ, ಸಿ ಎಸ್ ಮೆಹಬೂಬ್ ಪಾಷಾ, ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ ಪ್ರಮುಖ ರಾಜಕೀಯ ಶಕ್ತಿ ಕೇಂದ್ರವಾಗಿದ್ದು, ಎರಡು ದಶಕಗಳಿಂದ ಮುಸ್ಲಿಮ್ ಮುಖಂಡರು ರಾಜಕೀಯ ಪ್ರಾತಿನಿದ್ಯದಿಂದ ವಂಚಿತರಾಗಿದ್ದಾರೆ.
ಕಾಂಗ್ರೇಸ್ಸಿಗೆ ಮುಸ್ಲಿಮ್ ಮತಗಳು ಬೇಕು, ಆದ್ರೆ ಅಧಿಕಾರ ಮಾತ್ರ ಬೇರೆಯವರಿಗೆ ಅನ್ನೋ ಆಕ್ರೋಶ ಸಮುದಾಯದಲ್ಲಿ ಕೇಳಿ ಬಂದಿದೆ.
ಎ ಎಮ್ ಹಿಂಡಸಗೇರಿ, ಅಲ್ತಾಫ್ ಹಳ್ಳೂರ, ಇಸ್ಮಾಯಿಲ್ ತಮಟಗಾರ, ಯೂಸುಫ್ ಸವಣೂರು, ಸಿ ಎಷ್ಟು ಮೆಹಬೂಬ್ ಪಾಷಾ ಇವರ ಪೈಕಿ ಯಾರಿಗಾದರೂ ಇಬ್ಬರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಮುಸ್ಲಿಮ್ ಸಮುದಾಯ ಆಗ್ರಹಿಸಿದೆ.
ಕಾಂಗ್ರೇಸ್ 11 ರ ಪೈಕಿ 7 ಸ್ಥಾನಗಳಲ್ಲಿ ಅನಾಯಾಸ ಗೆಲುವು ಸಾಧಿಸಲಿದ್ದು, ಹುಬ್ಬಳ್ಳಿ ಧಾರವಾಡದ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಟ್ಟು, ಸಾಮಾಜಿಕ ನ್ಯಾಯ ಪರಿಪಾಲಿಸಬೇಕೆಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
