ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುವ ಮುನ್ನವೇ, ವಿಶೇಷ ತನಿಖಾ ತಂಡ, ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣರ ಬೆಡ್ ರೂಮ್ ಜಾಲಾಡಿದೆ.
ಸಾಕ್ಷ್ಯ ಕಲೆಹಾಕುತ್ತಿರುವ ಎಸ್ ಐ ಟಿ ಅಧಿಕಾರಿಗಳು FSL ತಂಡದೊಂದಿಗೆ ಹಾಸನದ ಪ್ರಜ್ವಲ್ ಮನೆಯಲ್ಲಿ ತಪಾಸನೆ ನಡೆಸಿದ್ದಾರೆ. ಪ್ರಜ್ವಲ್ ಬೆಡ್ ರೂಮ್ ಜಾಲಾಡಿದ ಅಧಿಕಾರಿಗಳು ಪ್ರಜ್ವಲ್ ಬಳಸುತ್ತಿದ್ದ ಗಾದಿ ಮತ್ತು ತಲೆದಿಂಬನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಎಸ್ ಐ ಟಿ ಎದುರು ಹಾಜರಾಗುವದಾಗಿ ಪ್ರಜ್ವಲ್ ವಿಡಿಯೋ ಸಂದೇಶದ ಮೂಲಕ ಹೇಳಿದ್ದು, ಪ್ರಜ್ವಲ್ ಬರುವ ಮುನ್ನವೇ ಅಧಿಕಾರಿಗಳು, ಸಂತ್ರಸ್ತೆಯರ ಹೇಳಿಕೆ ಸೇರಿದಂತೆ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ.
