ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಜನ ನೊಂದ ಮಹಿಳೆಯರ ಪರ ದ್ವನಿ ಎತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಪಾಸಪೋರ್ಟ ರದ್ದು ಯಾವಾಗ? ಪ್ರಜ್ವಲ್ ಬಂಧನಕ್ಕೆ ಹಿಂದೇಟು ಯಾಕೆ ಎಂದು ಪ್ರತಿಭಟನಾಕಾರರು ಬಿತ್ತಿ ಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಿಂದಲೂ ನೂರಕ್ಕೂ ಹೆಚ್ಚು ಜನ ಹಾಸನದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಶಂಕರ ಹಲಗತ್ತಿ, ಬಿ ಎಸ್ ಸೊಪ್ಪಿನ, ಎಲ್ ಆರ್ ಅಂಗಡಿ ಬಿ ಎನ್ ಪೂಜಾರ, ಎ ಎಮ್ ಖಾನ್, ಬಿ ಈ ಇಳಿಗೇರ, ಗಂಗಾಧರ ಗಾಡದ, ಪ್ರತಾಪ ಬಹುರೂಪಿ, ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ವಿಶ್ವೇಶ್ವರಿ ಹಿರೇಮಠ, ಪ್ರಭಾವತಿ ದೇಸಾಯಿ, ಸೇರಿದಂತೆ ನೂರಾರು ಜನ ಭಾಗವಹಿಸಿದ್ದಾರೆ.
ಮಹಾರಾಜಾ ಪಾರ್ಕನಿಂದ ಆರಂಭವಾದ ಮೆರವಣಿಗೆಯಲ್ಲಿ ಆಕ್ರೋಶ ಮಡುಗಟ್ಟಿತ್ತು.