ಬಿಜೆಪಿಯ ಹಿರಿಯ ನಾಯಕ ಮಾ ನಾಗರಾಜರಿಗೆ ವಿಧಾನ ಪರಿಷತ್ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. ಮಾ ನಾಗರಾಜರಿಗೆ ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳಿಸುವ ಮೂಲಕ ಕುರುಬ ಸಮಾಜದ ವಿಶ್ವಾಸ ಗಳಿಸಬಹುದು ಅನ್ನೋ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.
ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಕಣ್ಣು ಕೆಂಪಾಗಿಸಿಕೊಂಡಿರುವ ಕೆ ಎಸ್ ಈಶ್ವರಪ್ಪ, ಕುರುಬ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮೇಲೆ ವಾಗ್ದಾಳಿ ಮುಂದುವರೆಸಿರುವ ಕೆ ಎಸ್ ಈಶ್ವರಪ್ಪನವರಿಗೆ ಕೌಂಟರ ಕೊಡಲು ಮಾ ನಾಗರಾಜರಿಗೆ ವಿಧಾನ ಪರಿಷತ್ ಟಿಕೇಟ್ ನೀಡಲಾಗುತ್ತಿದೆ ಎನ್ನಲಾಗಿದೆ.
ಮಾ ನಾಗರಾಜಗೆ ವಿಧಾನ ಪರಿಷತ ಟಿಕೇಟ್ ಪಕ್ಕಾ ಆಗಿದ್ದು, ಕೇಂದ್ರದ ವರಿಷ್ಟರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.