ಲೋಕಸಭೆಯ 543 ಸ್ಥಾನಗಳಿಗೆ ಇಂದು ಕೊನೆಯ ಹಂತದ ಮತದಾನ ಚುರುಕಿನಿಂದ ನಡೆದಿದೆ. ಈಗಾಗಲೇ 6 ಹಂತದ ಚುನಾವಣೆ ಮುಗಿದಿದೆ. 8 ರಾಜ್ಯಗಳಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ರ ವರೆಗೆ ನಡೆದ ಶೇಕಡಾವಾರು ಮತದಾನದ ವಿವರ ಹೀಗಿದೆ.
ಬಿಹಾರ 10.58, ಚಂದಿಗಡ 10.06, ಹಿಮಾಚಲ ಪ್ರದೇಶ 14.25, ಜಾರ್ಖಂಡ 12.15, ಓಡಿಸಾ 7.69, ಪಂಜಾಬ 9.64, ಉತ್ತರ ಪ್ರದೇಶ 12.94, ಪಶ್ಚಿಮ ಬಂಗಾಳದಲ್ಲಿ 12.64 ರಷ್ಟು ಮತ ಚಲಾವಣೆಯಾಗಿದೆ.