ಕರ್ನಾಟಕದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಶಿವಮೊಗ್ಗ ಮೂಲದ ಬಿಲ್ಕಿಸ್ ಬಾನುಗೆ ಕಾಂಗ್ರೇಸ್ ವಿಧಾನ ಪರಿಷತ್ ಟಿಕೇಟ್ ಘೋಷಿಸಿದೆ. ಟಿಕೇಟ್ ಕೇಳದೆ ಇದ್ದರು ಬಿಲ್ಕಿಸ್ ಬಾನು ಇವರಿಗೆ ಕಾಂಗ್ರೇಸ್ ಟಿಕೇಟ್ ನೀಡಿದ್ದು, ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಜನತಾದಳದಲ್ಲಿದ್ದ ಬಿಲ್ಕಿಸ್ ಬಾನು ಸಿದ್ದರಾಮಯ್ಯನವರ ಜೊತೆ ಕಾಂಗ್ರೇಸ್ ಸೇರ್ಪಡೆಯಾಗಿದ್ದರು. ಜೆ ಎಚ್ ಪಟೇಲ ಮುಖ್ಯಮಂತ್ರಿಯಾಗಿದ್ದ ವೇಳೆ ಬಿಲ್ಕಿಸ್ ಬಾನು, ಶಿವಮೊಗ್ಗ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ನಂತರ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಸುಧೀರ್ಘ ಅವಧಿಗೆ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ್ದ ಬಿಲ್ಕಿಸ್ ಬಾನು, ಪಕ್ಷದಲ್ಲಿ ಸಕ್ರಿಯವಾಗಿ ಇರದೇ ಇದ್ದರು ಸಹ ಪಕ್ಷದ ನಾಯಕರು ಅಂತಹವರನ್ನು ಗುರುತಿಸಿ, ಕ್ರೀಯಾಶೀಲರಿದ್ದವರನ್ನು ಬದಿಗೆ ಸರಿಸಿದೆ.