ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ವಿರುದ್ಧ ಧರ್ಮಯುದ್ಧ ಸಾರಿದ್ದ ದಿಂಗಾಲೇಶ್ವರ ಸ್ವಾಮೀಜಿ ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ.
ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಎಸ್ ಆರ್ ಪಾಟೀಲರಿಗೆ ಕಾಂಗ್ರೇಸ್ ಟಿಕೇಟ್ ಕೊಡಿಸುವಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ.
ಬಾಗಲಕೋಟೆಯ ಎಸ್‌ಆರ್ ಪಾಟೀಲ್ ಪರ ದಿಂಗಾಲೇಶ್ವರ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದು, ಸ್ಫೋಟಕ ವಿಡಿಯೋ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನ ಒಪ್ಪಿಸುತ್ತೇನೆ ಎಂದಿರುವ ದಿಂಗಾಲೇಶ್ವರ ಸ್ವಾಮೀಜಿ, ನೀವು ಅವರನ್ನು ಭೇಟಿ ಮಾಡಿ ಎಂದು ಹೇಳಿದ್ದಾರೆ. ನಾನು ಇದನ್ನ ಒಂದು ಮಾಡಿ ಎಂದು ಡಿಕೆಶಿಗೆ ಹೇಳಿದ್ದೇನೆ ಎಂದಿದ್ದಾರೆ. ನೀವು ಇದನ್ನ ಒಂದು ಮಾಡಿ ನೋಡಿ ನೀವು ಮುಂದೆ ಸಿಎಂ ಆಗುವ ತನಕ ಏನೇನು ಕೆಲಸ ಮಾಡ್ತೀವಿ ನೋಡಿ ಎಂದು ಹೇಳಿರುವ ಸ್ವಾಮೀಜಿ ಒಕ್ಕಲಿಗರ ಸಮುದಾಯದ ಜೊತೆ ಲಿಂಗಾಯತ ಸಮುದಾಯಕ್ಕು ಹತ್ತಿರವಾಗ್ತಿದ್ದಾರಾ ಅನ್ನೋ ಮಾತು ಕೇಳಿ ಬರುತ್ತಿದೆ