ಭಾರತದಲ್ಲಿ ನಮೋ ಯುಗ ಮತ್ತೆ ಆರಂಭವಾಗಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಏರಲು ಸಾಧ್ಯವಾಗದೆ ಇದ್ದರು ಸಹ ಟಿ ಡಿ ಪಿ ಹಾಗೂ ಜೆಡಿ(ಯು) ಬೆಂಬಲದೊಂದಿಗೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ.
ಸರಳ ಬಹುಮತಕ್ಕೆ ಬೇಕಿದ್ದ 272 ರ ಸಂಖ್ಯಾ ಗುರಿ ಮುಟ್ಟಲು, ಯಾವದೇ ಪಕ್ಷಕ್ಕೂ ಸಾಧ್ಯವಾಗದೆ, ಅತಂತ್ರ ಲೋಕಸಭೆ ಸನ್ನಿವೇಶ ನಿರ್ಮಾಣವಾಗಿತ್ತು. 2014 ಮತ್ತು 2019 ರಲ್ಲಿ 272 ರ ಗುರಿ ದಾಟಿದ್ದ ಬಿಜೆಪಿ ಸ್ವಂತ ಬಲ ಹೊಂದಿದ್ದರು ಸಹ ಎನ್ ಡಿ ಎ ಮಿತ್ರ ಪಕ್ಷಗಳ ಜೊತೆ ಸರ್ಕಾರ ರಚನೆ ಮಾಡಿತ್ತು. ಈ ಸಲವು ನರೇಂದ್ರ ಮೋದಿ ಮೂರನೇ ಬಾರಿ ಎನ್ ಡಿ ಎ ಒಕ್ಕೂಟದ ದಂಡನಾಯಕನಾಗಿ ಆಯ್ಕೆಗೊಂಡು ಮತ್ತೆ ಪ್ರಧಾನಿ ಪಟ್ಟ ಏರಿದ್ದಾರೆ.
73 ರ ಹಿರಿಯನಿಗೆ 72 ಮಂತ್ರಿಗಳ ಬೆಂಗಾವಲು
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಒಟ್ಟು 72 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. 72 ಸಚಿವ ಸ್ಥಾನಗಳ ಪೈಕಿ 61 ಸಚಿವ ಸ್ಥಾನ ಬಿಜೆಪಿ ಪಾಲಾಗಿದ್ದರೆ, 11 ಸಚಿವ ಸ್ಥಾನಗಳು ಮಿತ್ರ ಪಕ್ಷಗಳ ಪಾಲಾಗಿವೆ. 30 ಜನರಿಗೆ ಕಾಬಿನೇಟ, 36 ಜನರಿಗೆ ರಾಜ್ಯ ಮಂತ್ರಿ, 5 ಜನರಿಗೆ ಸ್ವತಂತ್ರ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.
ಮಿತ್ರ ಪಕ್ಷಗಳಾದ ಟಿ ಡಿ ಪಿ 2, ಜೆಡಿ(ಯು) 2, ಎಲ್ ಜೆ ಪಿ 1, ಜೆಡಿಎಸ್ 1, ಎಸ್ ಎಸ್ 1, ಆರ್ ಪಿ ಐ 1, ಆರ್ ಎಲ್ ಡಿ 1, ಎ ಡಿ (ಎಸ್) 1, ಎಚ್ ಎ ಎಮ್ ಪಕ್ಷಕ್ಕೆ 1 ಸಚಿವ ಸ್ಥಾನ ನೀಡಲಾಗಿದೆ.