ಗದಗ ಶಹರದಲ್ಲಿ ತಲೆನೋವಾಗಿದ್ದ ಕಳ್ಳತನ ಪ್ರಕರಣ ಭೇಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕಳ್ಳತನ ಮಾಡಿದ್ದ 401 ಗ್ರಾಮನಷ್ಟು ಬಂಗಾರ ಹಾಗೂ 2 ಲಕ್ಷ 80 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗದಗ ಶಹರ ಠಾಣೆಯ 4 ಕಡೆ, ಬಡಾವಣೆ ಠಾಣೆಯ 1 ಮತ್ತು ಗ್ರಾಮೀಣ ಠಾಣೆ ವ್ಯಾಪ್ತಿಯ 1 ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ಕಳ್ಳರನ್ನು ಪತ್ತೆ ಹಚ್ಚಲು ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ಎಸ್ ನೇಮಗೌಡ ವಿಶೇಷ ತಂಡಗಳನ್ನು ರಚಿಸಿದ್ದರು.