ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಇದೀಗ ಪಂಚ ಗ್ಯಾರಂಟಿ ತಲೆನೋವು ತಂದಿದೆ. ಐದು ಯೋಜನೆಗಳನ್ನು ಮುಂದುವರೆಸಲು ಹಣ ಬೇಕಾಗಿರುವದರಿಂದ, ಅಗತ್ಯ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆ ಎನ್ನಲಾಗಿದೆ.
ಬೆಂಗಳೂರು ಮೂಲದ ಬೊಸ್ಟನ್ ಕನ್ಸಲ್ಟಂಟ ಗ್ರೂಪ್ ( BCG ) ನ್ನು 6 ತಿಂಗಳ ಅವಧಿಗೆ 9.5 ಕೋಟಿ ನೀಡಿ ಸಲಹೆ ಪಡೆಯಲಿದೆ. ರಾಜ್ಯದ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸಲು ಈ ಸಂಸ್ಥೆ ಸರ್ಕಾರಕ್ಕೆ ಸಲಹೆ ನೀಡಲಿದೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವ, ಮತ್ತು ಸೋರಿಕೆಯನ್ನು ತಡೆಗಟ್ಟಲು bcg ಸಂಸ್ಥೆ ಸಲಹೆ ನೀಡಲಿದೆ. BCG ಸಂಸ್ಥೆ ಹಣಕಾಸು ಇಲಾಖೆಯೊಂದಿಗೆ ಕೆಲಸ ಮಾಡಲಿದೆ. ಇದಕ್ಕಾಗಿ ಸರ್ಕಾರ BCG ಸಂಸ್ಥೆಗೆ 6 ತಿಂಗಳ ಅವಧಿಗೆ 9.5 ಕೋಟಿ ವ್ಯಯಿಸಲಿದೆ.
ಪಂಚ ಗ್ಯಾರಂಟಿಗಳಿಗೆ ವಾರ್ಷಿಕ 50 ರಿಂದ 60 ಸಾವಿರ ಕೋಟಿ ಬೇಕು ಎಂದು ಅಂದಾಜಿಸಲಾಗಿದ್ದು, 5 ಕೋಟಿ 10 ಲಕ್ಷ ಜನ ಗ್ಯಾರಂಟಿ ಲಾಭ ಪಡೆಯುತ್ತಿದ್ದಾರೆ.