ಕರ್ನಾಟಕ ಪೊಲೀಸ್, ದೇಶದಲ್ಲಿ ಹೆಸರು ಮಾಡಿದ್ದಾರೆ. ಅದರಲ್ಲಿಯೂ ಬೆಂಗಳೂರು ಹೊರತು ಪಡಿಸಿದ್ರೆ, ಹುಬ್ಬಳ್ಳಿ ಧಾರವಾಡ ಪೊಲೀಸರು ಅಪರಾಧ ಪ್ರಕರಣಗಳನ್ನು ಭೇಧಿಸುವಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇಲಾಖೆಗೆ ಸವಾಲಾದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ 49 ಲಕ್ಷ ರೂ ಮೌಲ್ಯದ 315 ಮೊಬೈಲ್ ಫೋನ್ ಗಳನ್ನ #CEIR Portal ಮೂಲಕ ಪತ್ತೆ ಮಾಡಿ ಇಂದು ಮರಳಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಮೊಬೈಲ್ ಕಳೆದುಕೊಂಡವರಿಗೆ ಮೊಬೈಲ್ ಹಸ್ತಾಂತರಿಸಿದ್ದಾರೆ.
