ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಮಾನ್ಯ ನಾಗರಿಕನಿಗೆ ಬರೆ ನೀಡಿದೆ. ತೈಲಗಳ ಬೆಲೆ ಏರಿಕೆಯಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.
ರಾಜಧಾನಿಯಲ್ಲಿ ಕೆಂಪು ಸುಂದರಿ ಟಮೆಟೋ ಬೆಲೆ ಗಗನಕ್ಕೇರಿದೆ. ಕೆಜಿ ಒಂದಕ್ಕೆ 150 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಜಿ ಗಟ್ಟಲೇ ಖರೀದಿ ಮಾಡುವವರು ಇದೀಗ ಕಾಲು ಕೆಜಿ ಖರೀದಿ ಮಾಡಿ ಕೆಂಪು ಸುಂದರಿಗೆ ಕೈ ಮುಗಿಯುತ್ತಿದ್ದಾರೆ.
