ಕರ್ನಾಟಕ ಮತ್ತೊಂದು ಕ್ರೂರ ಕೃತ್ಯಕ್ಕೆ ಸಾಕ್ಷಿಯಾಗಿದೆ. ಹಾಸನದಲ್ಲಿ ಹಾಡುಹಗಲೇ ಗುಂಡಿನ ದಾಳಿ ನಡೆದಿದೆ. ಕಾರಿನಲ್ಲಿ ಹೊರಟಿದ್ದವರನ್ನು ನಿಲ್ಲಿಸಿ ಮನಸೋ ಇಚ್ಛೆ ಗುಂಡು ಹಾರಿಸಲಾಗಿದೆ.
ಗುಂಡಿಕ್ಕಿ ಇಬ್ಬರ ಹತ್ಯೆಗೈದ ಪಾತಕಿಗಳು ಪರಾರಿಯಾದ ಘಟನೆ ನಡೆದಿದೆ. ಕೆ ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೊಯ್ಸಳ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬೆಚ್ಚಿ ಬೀಳಿಸಿದೆ. ಒಬ್ಬನ ಶವ ಹೊರಗೆ ಬಿದ್ದಿದ್ದರೆ, ಮತ್ತೊಬ್ಬನ ಶವ ಕಾರಿನಲ್ಲಿದೆ.
ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮ್ಮದ ಸುಜಿತಾ ಭೇಟಿ ನೀಡಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತನಿಖೆ ಕೈಗೊಂಡಿದ್ದಾರೆ. ಆಸ್ತಿಯ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.