ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡದಲ್ಲಿ ಆಕ್ರಮ ಬಡಾವಣೆಗಳ ಹಾವಳಿ ಮಿತಿ ಮೀರಿದೆ. ಕಡಿಮೆ ಬೆಲೆಗೆ ರೈತರಿಂದ ಜಮೀನು ಖರೀದಿಸಿ, ಆಕ್ರಮ ಲೇಔಟಗಳನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿದೆ.
ಅವಳಿ ನಗರ ಬೆಳೆಯುತ್ತಿದ್ದಂತೆ ಇಂಚಿಂಚು ಭೂಮಿಗೂ ಬಂಗಾರದ ಬೆಲೆ ಬಂದಿದೆ. ಆಸರೆಗೆ ಮನೆಯೊಂದನ್ನು ಕಟ್ಟಿಕೊಳ್ಳೋಣ ಎಂದು ತಡಬಡಾಯಿಸುವ ಸಣ್ಣ ಹಾಗೂ ಮಧ್ಯಮ ವರ್ಗದ ಜನ ಯಾವದೇ ಧಾಖಲೆ ಕೇಳದೆ ಪ್ಲಾಟಗಳನ್ನು ಖರೀದಿ ಮಾಡುತ್ತಿದ್ದಾರೆ.
ಕೆಲವೊಂದು ಜಮೀನುಗಳನ್ನು 20×30 ಮತ್ತು ಕೆಲವನ್ನು 30×40 ಅಳತೆಯ ಪ್ಲಾಟಗಳನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಪವರ್ ಆಫ್ ಆಟಾರ್ನಿ ಕರಾರಿನ ಮೇಲೆ ಜಮೀನನ್ನು ಪ್ಲಾಟಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದ್ದು, ಪ್ಲಾಟ್ ಖರೀದಿಸಿದವರು ಮೋಸ ಹೋಗುತ್ತಿದ್ದಾರೆ.
ಧಾರವಾಡದ ವಿಧ್ಯಾಗಿರಿ, ಉಪನಗರ, ಶಹರ ಪೊಲೀಸ್ ಠಾಣೆಗಳಲ್ಲಿ ಪ್ಲಾಟ್ ಖರೀದಿಸಿ ಲಕ್ಷ ಲಕ್ಷ ಹಣ ಕಳೆದುಕೊಂಡವರು ನಿತ್ಯ ಬರುತ್ತಿದ್ದಾರೆ. ಇನ್ನು ಹುಬ್ಬಳ್ಳಿಯ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಮೋಸ ಹೋದವರು ಠಾಣೆಗೆ ಬರುತ್ತಿದ್ದಾರೆ.
ಇಷ್ಟೆಲ್ಲಾ ಆದರು ಸಹ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಫುಲ್ ಸೈಲೆಂಟ್ ಆಗಿದ್ದು, ಸಂಶಯಕ್ಕೆ ಎಡೆ ಮಾಡಿದೆ.