ಆಡಳಿತ ಪಕ್ಷದ ಶಾಸಕನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದ್ರಾಬಾದನಲ್ಲಿ ನಡೆದಿದೆ. ತೆಲಂಗಾಣದ ಆಡಳಿತ ಪಕ್ಷದ ಚೊಪ್ಪದಂಡಿ ಕ್ಷೇತ್ರದ ಶಾಸಕ ಡಾ.ಮೇಡಿಪಲ್ಲಿ ಸತ್ಯಂ ಅವರ ಪತ್ನಿ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲ್ವಾಲ್‌ನ ಪಂಚಶೀಲ ಕಾಲೋನಿ ನಿವಾಸಿ ರೂಪಾ ದೇವಿ ಎಂಬ ಮಹಿಳೆ ಸಂಜೆಯ ವೇಳೆಗೆ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಮನೆಯವರು ಬಾಗಿಲು ಒಡೆದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಅಲ್ವಾಲ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.