ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಸಭಾ ಸದಸ್ಯರಾದ ಬಳಿಕ ತೆರವು ಗೊಂಡಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೇಟ ಪಡೆಯಲು ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತ ಹೊರಟಿದೆ. ಕಳೆದ ಸಲ ಸೋಲು ಅನುಭವಿಸಿರುವ ಯಾಸಿರಖಾನ ಪಠಾಣ ಮತ್ತೆ ಟಿಕೇಟ್ ಸಿಗುವ ಆಶಾಭಾವನೆ ಹೊಂದಿದ್ದಾರೆ. ಇದೆಲ್ಲದರ ಮಧ್ಯೆ ಹೊಸದೊಂದು ಹೆಸರು ಕೇಳಿ ಬಂದಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿರುವ ಆನಂದ ಗಡ್ಡದೇವರಮಠ ಹೆಸರು ಕೇಳಿ ಬಂದಿದೆ. ಆನಂದ ಗಡ್ಡದೇವರಮಠರಿಗೆ ಟಿಕೇಟ ನೀಡಲು ಪಕ್ಷದ ಹೈಕಮಾಂಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಶಿಗ್ಗಾವ ಕ್ಷೇತ್ರದಲ್ಲಿ ಮುಸ್ಲಿಮ್ ಹಾಗೂ ಲಿಂಗಾಯತರು ಸಮ ಪ್ರಮಾಣದಲ್ಲಿದ್ದು, ಈ ಸಲ ಮುಸ್ಲಿಮ್ ಅಭ್ಯರ್ಥಿ ಬದಲು ಲಿಂಗಾಯತರಿಗೆ ಕಣಕ್ಕೆ ಇಳಿಸುವ ಸಾಧ್ಯತೆ ಗೋಚರಿಸುತ್ತಿದೆ.
