ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಇದೀಗ ಸಿ ಎಮ್ ಖುರ್ಚಿಗಾಗಿ ಗುದ್ದಾಟ ಆರಂಭವಾಗಿದೆ. ನಾಡ ಪ್ರಭು ಕೆಂಪೇಗೌಡರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಎದುರಿಗೆ ಮುಖ್ಯಮಂತ್ರಿ ಸ್ಥಾನ ಡಿ ಕೆ ಶಿವಕುಮಾರಗೆ ಬಿಟ್ಟು ಕೊಡಬೇಕೆಂದು ಒಕ್ಕಲಿಗ ಸಮಾಜದ ಶ್ರೀಗಳು ಹೇಳಿದ್ದೆ ತಡ, ಆಡಳಿತ ಪಕ್ಷದಲ್ಲಿ ತಿಕ್ಕಾಟ ಜೋರಾಗಿದೆ.
ಇದೀಗ ಶ್ರೀ ಶೈಲ ಶ್ರೀಗಳು ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಸ್ಥಾನವನ್ನು ವೀರಶೈವ ಲಿಂಗಾಯತರಿಗೆ ಬಿಟ್ಟು ಕೊಡಬೇಕೆಂದು ಆಗ್ರಹ ಮಾಡಿದ್ದಾರೆ.
ಸಿ ಎಮ್ ಖುರ್ಚಿಗಾಗಿ ಜಾತಿ ರಾಜಕೀಯ ಶುರುವಾಗಿದ್ದು, ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಅನ್ನೋದನ್ನ ಕಾದು ನೋಡಬೇಕಾಗಿದೆ.
