ಕ್ರಿಮಿನಲ್ ಪ್ರಕರಣಗಳಿಗೆ ಸಂಬಂದಪಟ್ಟಂತೆ ಇಂದಿನಿಂದ ಹೊಸ ಕಾನೂನು ಜಾರಿಗೆ ಬಂದಿದೆ. ಬ್ರಿಟಿಷ ಕಾಲದಿಂದಲೂ ಜಾರಿಯಲ್ಲಿದ್ದ IPC, CRPC ಮತ್ತು Indian Evidence ಕಾಯ್ದೆಗಳನ್ನು ರದ್ದುಗೊಳಿಸಿ, ಅಮೂಲಾಗ್ರ ಬದಲಾವಣೆ ಮಾಡಲಾಗಿದೆ.
ಅವುಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿವೆ.
163 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡ ಸಂಹಿತೆ, 126 ವರ್ಷಗಳಷ್ಟು ಹಳೆಯದಾದ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳಷ್ಟು ಹಳೆಯದಾದ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲು ಈ ಮೂರು ಕಾನೂನುಗಳು ಜಾರಿಗೆ ಇಂದಿನಿಂದ ಜಾರಿಗೆ ಬಂದಿವೆ.
ಕನ್ನಡದಲ್ಲಿ ಪ್ರಕಟವಾದ ಹೊಸ ಮೂರು ಕಾಯಿದೆಗಳು ಅತ್ಯಂತ ಜನಪ್ರಿಯಗೊಂಡಿದ್ದು, ಮೂರು ಕಾಯಿದೆಗಳಿಗೆ ಕನಾ೯ಟಕ ಸರಕಾರದ ಕಾನೂನು ಸಚಿವರಾದ ಡಾ:ಎಚ್.ಕೆ. ಪಾಟೀಲ್ ಮುನ್ನುಡಿ ಬರೆದಿದ್ದು, ಗೃಹ ಸಚಿವರಾದ ಡಾ: ಜಿ . ಪರಮೇಶ್ವರ ಇವರು ಶುಭ ಸಂದೇಶ ಬರೆದಿದ್ದಾರೆ.
ಹೊಸ ಕಾನೂನಿಗೆ ಸಂಬಂಧಪಟ್ಟಂತೆ ಗದಗನ ಖ್ಯಾತ ನ್ಯಾಯವಾದಿ ಎಸ್ ಕೆ ನದಾಫ ಇವರ ಸಂಪಾದಕತ್ವದಲ್ಲಿ Karnataka Law Reporter Publication Bangalore ಮೂರು ಪುಸ್ತಕಗಳನ್ನು ಪ್ರಕಟ ಮಾಡಿದೆ. ಈ ಪುಸ್ತಕಗಳಲ್ಲಿ ಹೊಸದಾಗಿ ರೂಪುಗೊಂಡ Sections ಗಳ ಬಗ್ಗೆ ವಿವರವಾಗಿ ಹೇಳಲಾಗಿದೆ.
ಪುಸ್ತಕಗಳು ಗದಗನಲ್ಲಿರುವ ಎಸ್ ಕೆ ನದಾಫ 9845550073 ಇವರ ಹತ್ತಿರ ಲಭ್ಯವಿವೆ.
