Download Our App

Follow us

Home » ಕರ್ನಾಟಕ » ಕರ್ನಾಟಕದ ಈ ಜಿಲ್ಲೆಗಳಲ್ಲಿ ಕಲಿತವರು ಎಷ್ಟು, ಕಲಿಯಲಾದವರು ಎಷ್ಟು ಜನ! ಇಲ್ಲಿದೆ ಡಿಟೇಲ್ ಮಾಹಿತಿ

ಕರ್ನಾಟಕದ ಈ ಜಿಲ್ಲೆಗಳಲ್ಲಿ ಕಲಿತವರು ಎಷ್ಟು, ಕಲಿಯಲಾದವರು ಎಷ್ಟು ಜನ! ಇಲ್ಲಿದೆ ಡಿಟೇಲ್ ಮಾಹಿತಿ

ಜನಗಣತಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಸಾಕ್ಷರತೆಯ ಪ್ರಮಾಣವು 75.36% ಆಗಿದೆ 12. ಕರ್ನಾಟಕದಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆಯ ಪ್ರಮಾಣವು ಕ್ರಮವಾಗಿ 82.47% ಮತ್ತು 68.08% ಆಗಿದೆ. ಅತಿ ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿರುವ ಕರ್ನಾಟಕದ ಪ್ರಮುಖ ಐದು ಜಿಲ್ಲೆಗಳು ಇಲ್ಲಿವೆ.

ದಕ್ಷಿಣ ಕನ್ನಡ 88.57% ರಷ್ಟು ಸಾಕ್ಷರತೆ ಹೊಂದಿದ ಜಿಲ್ಲೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 2,089,649 ಜನಸಂಖ್ಯೆ ಇದ್ದು, ಆ ಪೈಕಿ 1,666,323 ಜನ ಅಕ್ಷರಸ್ಥರಿದ್ದಾರೆ. ಆ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇಕಡಾ 88.57% ರಷ್ಟಿದೆ.

ಬೆಂಗಳೂರು ಜಿಲ್ಲೆಯಲ್ಲಿ ಒಟ್ಟು 9,621,551 ಜನಸಂಖ್ಯೆ ಇದ್ದು, ಈ ಪೈಕಿ 7,512,276 ಜನ ಅಕ್ಷರಸ್ಥರಿದ್ದಾರೆ. ಸಾಕ್ಷರತಾ ಪ್ರಮಾಣ ಶೇಕಡಾ 87.67% ರಷ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು1,177,361 ಜನಸಂಖ್ಯೆಯ ಪೈಕಿ 926,429 ಜನ ಅಕ್ಷರ ಕಲಿತಿದ್ದಾರೆ. ಈ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 86.24%: ರಷ್ಟಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,437,169 ಜನಸಂಖ್ಯೆಯ ಪೈಕಿ 1,081,906 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 84.06%ರಷ್ಟಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು 554,519 ಜನಸಂಖ್ಯೆಯ ಪೈಕಿ  412,877 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇಕಡಾ 82.61% ರಷ್ಟಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 1,752,753 ಜನಸಂಖ್ಯೆಯ ಪೈಕಿ 1,263,016 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 80.45% ರಷ್ಟಿದೆ 

ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,847,023 ಜನಸಂಖ್ಯೆಯ ಪೈಕಿ 1,301,664 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣ 80.00% ರಷ್ಟಿದೆ. 

ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿದ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,174,271 ಜನಸಂಖ್ಯೆಯ ಪೈಕಿ 510,003 ಜನ ಅಕ್ಷರ ಕಲಿತಿದ್ದಾರೆ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇಕಡಾ 51.83% ರಷ್ಟಿದೆ

Karnataka Files
Author: Karnataka Files

Leave a Comment

RELATED LATEST NEWS

error: Content is protected !!