ರಾಜ್ಯದ ವಿವಿಧ ಜೈಲಿನಲ್ಲಿರುವ ಸಜಾ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಇಂದು ಬಿಡುಗಡೆ ಮಾಡಲಾಗುತ್ತಿದೆ. ಜೀವಾವಧಿ ಶಿಕ್ಷೆ ಅನುಭವಿಸಿ, ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿದ್ದು, ಪರಿವರ್ತನೆಗೊಂಡಿರುವ 77 ಕೈದಿಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ.
ಧಾರವಾಡ ಜೈಲಿನಲ್ಲಿರುವ 6 ಕೈದಿಗಳು ಹತ್ತು ವರ್ಷ ಪೂರೈಸಿದ್ದು, ಉತ್ತಮ ನಡುವಳಿಕೆ ತೋರಿದ್ದಾರೆ. ಅಂತಹವರನ್ನು ಗುರುತಿಸಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲು ರಾಜ್ಯಪಾಲರು ನೀಡಿದ್ದಾರೆ ಎನ್ನಲಾಗಿದೆ.