ಧಾರವಾಡ ಜಿಲ್ಲೆಯ ಅನ್ನದಾತ ಒಂದಿಲ್ಲೊಂದು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾನೆ. ಅತಿವೃಷ್ಟಿ, ಅನಾವೃಷ್ಟಿಗೆ ನಲುಗಿರುವ ರೈತ, ವ್ಯವಸಾಯಕ್ಕೆ ಸಾಲ ಮಾಡಿಕೊಂಡು ಬಳಲುತ್ತಿದ್ದಾನೆ.
ಧಾರವಾಡ ಜಿಲ್ಲೆಯ ರೈತ, ಸಾಲದ ಶೂಲಕ್ಕೆ ನೇಣಿಗೆ ಕೊರಳೂಡ್ದುತ್ತಿದ್ದಾನೆ. ಜುಲೈ 6 ರ ವರೆಗೆ ಧಾರವಾಡ ಜಿಲ್ಲೆಯಲ್ಲಿ 101 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
101 ರೈತ ಆತ್ಮಹತ್ಯೆಯ ಪೈಕಿ 75 ಜನ ರೈತರು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, 73 ಮೃತ ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.
ಎರಡು ಪ್ರಕರಣಗಳು ಜಿಲ್ಲಾಧಿಕಾರಿ ಹಂತದಲ್ಲಿ ಪರಿಶೀಲನೆ ನಡೆಯುತ್ತಿವೆ. ಇದೇ ವೇಳೆ 26 ರೈತ ಆತ್ಮಹತ್ಯೆಗಳ ಪ್ರಕರಣಗಳಿ ತಿರಸ್ಕತಗೊಂಡಿವೆ.