7 ಬಾರಿ ಸಂಸದರಾಗಿರುವ ಬಿಜೆಪಿಯ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ದಲಿತನಾದ ನಾನು 7 ಬಾರಿ ಸಂಸದನಾಗಿದ್ದೇನೆ. ಹಿರಿಯ ದಲಿತ ಸಂಸದನಾದ ನನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸದೆ ಅನ್ಯಾಯ ಮಾಡಲಾಗಿದೆ ಎಂದು ಅವಲತ್ತುಕೊಂಡಿದ್ದಾರೆ.
ವಿಜಯಪುರದಲ್ಲಿ ಸಂಸದರ ಕಚೇರಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದ ಬಳಿಕ ಬೇಸರ ಹೊರಹಾಕಿದ ರಮೇಶ ಜಿಗಜಿಣಗಿ, ಕೇಂದ್ರದಲ್ಲಿ ಮೇಲ್ಜಾತಿಯವರೇ ಮಂತ್ರಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ದಲಿತ ವಿರೋಧಿ, ಬಿಜೆಪಿ ಸೇರುವದು ಬೇಡ ಎಂದು ನನ್ನ ಸ್ನೇಹಿತರು ಹೇಳಿದ್ದರು. ಅವರ ಮಾತು ಕಡೆಗಣಿಸಿ ಬಿಜೆಪಿ ಸೇರಿದೆ ಎಂದು ರಮೇಶ ಮನದಾಳದ ಮಾತನ್ನು ಹೇಳುವ ಮೂಲಕ, ಬಿಜೆಪಿ ವರಿಷ್ಟರಿಗೆ ಮುಜುಗುರವುಂಟು ಮಾಡಿದ್ದಾರೆ.