ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಹುಬ್ಬಳ್ಳಿಯ ಸ್ಟೇಷನ್ ರಸ್ತೆಗೆ, ಕಾನೂನು ಬದ್ದವಾಗಿ ಇದ್ದ ಸರ್ದಾರ ಮೆಹಬೂಬ ಅಲಿ ಖಾನ್ ರಸ್ತೆ ಹೆಸರನ್ನು ತೆಗೆದು ಹಾಕಿದ್ದಾರೆ.
ಹುಬ್ಬಳ್ಳಿ ನಗರವು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗುರುತಿಸಿಕೊಂಡಿದ್ದು, ರಸ್ತೆಗಳು ವಿಶಾಲವಾಗುತ್ತಿವೆ. ಆದ್ರೆ ಈ ಸ್ಟೇಷನ್ ರಸ್ತೆಗೆ ಪಾಲಿಕೆಯೇ ಇಟ್ಟಿದ್ದ ಸರ್ದಾರ ಮೆಹಬೂಬ್ ಅಲಿ ಖಾನ್ ಹೆಸರು ತೆಗೆದು ಹಾಕಿ ಕೇವಲ ಸ್ಟೇಷನ್ ರಸ್ತೆ ಎಂದು ಫಲಕ ಹಾಕಿದೆ.
ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಸ್ಟೇಷನ್ ರಸ್ತೆಗೆ ಸರ್ದಾರ ಮೆಹಬೂಬ್ ಅಲಿ ಖಾನ್ ರಸ್ತೆ ಎಂದು ಫಲಕ ಹಾಕುವಂತೆ ಒತ್ತಾಯಿಸಿದ್ದಾರೆ.