ವಿಶಾಲ ವ್ಯಾಪ್ತಿ ಹೊಂದಿರುವ ಧಾರವಾಡದ ಉಪನಗರ ಪೊಲೀಸ್ ಠಾಣೆ ವಿಧ್ಯಾನಗರಿಯಲ್ಲಿ ಹೆಸರು ಮಾಡುತ್ತಿದೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಮಟಕಾ, ಜೂಜಾಟ, ಬೆಟ್ಟಿಂಗ ಪ್ರಕರಣಗಳು ನಡೆಯದೆ ಇರುವದು ಸೋಜಿಗ ಮೂಡಿಸಿದ್ರು ಅತಿಶಯೋಕ್ತಿಯಲ್ಲ. ಇದಕ್ಕೆಲ್ಲ ಕೆಲಸದಲ್ಲಿನ ಚಾಣಾಕ್ಷತೆ ಕಾರಣ.
ಧಾರವಾಡದಲ್ಲಿ ಶಹರ, ವಿಧ್ಯಾಗಿರಿ ಹಾಗೂ ಉಪನಗರ ಪೊಲೀಸ್ ಠಾಣೆಗಳಿದ್ದು, ಉಪನಗರ ಠಾಣೆ ಮಾತ್ರ ಇತ್ತೀಚಿಗೆ ಹೆಸರು ಮಾಡಿದೆ. ಕ್ರೈಮ್ ಗಳನ್ನು ಕರಾರುವಕ್ಕಾಗಿ ಕಟ್ಟಿಹಾಕಲಾಗುತ್ತಿದೆ.
2016 ರಲ್ಲಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದು ಹೋದ ಕೊಲೆ ಪ್ರಕರಣ ಸಿ ಬಿ ಐ ( CBI ) ಕಟ್ಟೆ ಏರಿದೆ. 2023 ರ ಡಿಸೆಂಬರ್ ತಿಂಗಳಲ್ಲಿ ಆಸ್ತಿಗಾಗಿ ನಡೆದ ಕೊಲೆ ಪ್ರಕರಣದಲ್ಲಿ, ಕೊಲೆಯಾದವನನ್ನು, ಠಾಣೆಯವರೇ ನಿಂತು ಅಂತ್ಯಕ್ರೀಯೆ ಮಾಡಿ ಕೋಟಿ, ಕೋಟಿ ಪುಣ್ಯ ಸಂಪಾದನೆ ಮಾಡಿಕೊಂಡಿದ್ದಾರೆ.