ವ್ಯಾಪಕವಾಗಿ ಹರಡಿರುವ ಡೆಂಗ್ಯೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರ್ಕಾರ ಪುಕ್ಕಟೆ ಸಲಹೆ ನೀಡುತ್ತಿದೆ.
ಆದರೆ ಪಕ್ಕದ ಕಾಲೋನಿಯಿಂದ ಹರಿದು ಬರುತ್ತಿರುವ ಚರಂಡಿ ನೀರು, ದೊಡ್ಡ ಗಟಾರಗಳು ಬಂದ್ ಆಗಿದ್ದರ ಪರಿಣಾಮ ಮನೆ ಮುಂದೆ ಬಂದು ನಿಲ್ಲುತ್ತಿವೆ.
ಪ್ರಜ್ಞಾವಂತರೆ ಇರುವ ಧಾರವಾಡದ ಮಾಳಮಡ್ಡಿ, ಸುಂಕಪುರ ಕಾಂಪೌಂಡ್, ಕಚ್ಚಿಮಠ ಕಾಂಪೌಂಡ್, ಶೇಷಾದ್ರಿ ಅಪಾರ್ಟಮೆಂಟ್, ತಾಡಮೋರೆ ಕಾಂಪೌಂಡ್, ಕೆವಿಜಿ ಬ್ಯಾಂಕ್, ಸೇರಿದಂತೆ ಅನೇಕ ಬಡಾವಣೆಗಳ ನಾಗರಿಕರಿಗೆ ಡೆಂಗ್ಯೂ ಭಯಯುಂಟಾಗಿದೆ.
ಪಕ್ಕದ ಗೌಳಿ ಗಲ್ಲಿಯಿಂದ ಬರುವ ಚರಂಡಿ ನೀರು ಡೆಂಗ್ಯೂ ಭಯ ಹುಟ್ಟಿಸಿದ್ದು, ಪಾಲಿಕೆ ಅಧಿಕಾರಿಗಳು ಫುಲ್ ಸೈಲೆಂಟ್ ಆಗಿದ್ದಾರೆ.