ಸಮಾಜಮುಖಿ ಕೆಲಸ ಮಾಡುತ್ತಾ ಬಂದಿರುವ ಸಂತೋಷ್ ಲಾಡ್ ಫೌಂಡೇಶನ್ ಇದೀಗ ಮತ್ತೊಂದು ಮಹತ್ತರ ಕೆಲಸಕ್ಕೆ ಕೈಹಾಕಿದೆ.
ನಿರುದ್ಯೋಗಿ ಯುವಕರಿಗೆ ಉಚಿತವಾಗಿ 106 ಎಲೆಕ್ಟ್ರಿಕ್ ಆಟೋಗಳನ್ನು ನೀಡುತ್ತಿದೆ. ಜುಲೈ 13 ರಂದು ಸಂಜೆ ಹುಬ್ಬಳ್ಳಿಯ ಗೋಕುಲ್ ಗಾರ್ಡನನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಟೋಗಳನ್ನು ನೀಡಲಾಗುತ್ತಿದೆ.
ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ನೀಡಲಾಗುತ್ತಿದೆ. ಕಳೆದ ವರ್ಷ 500 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲಾಗಿತ್ತು.
ಕಲಘಟಗಿ ಕ್ಷೇತ್ರದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಿರಂತರವಾಗಿ ಉಚಿತ ಆರೋಗ್ಯ ಸೇವೆ ನಡೆಯುತ್ತಿದ್ದು, ಸಂತೋಷ ಲಾಡ್ ಫೌಂಡೇಶನ್ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಗಳಿಸುತ್ತಿದೆ.