ಕೆಲಗೇರಿ ಹದ್ದು, ಸರ್ವೇ ನಂಬರ್ 513/ ಬ. ಪ್ಲಾಟ್ ನಂಬರ 3. ಸೈಜು 1.7 ಗುಂಟೆ. ಈ ಪ್ಲಾಟ್ ವಿಚಾರ ಈಗ ಸದ್ದು ಮಾಡುತ್ತಿದೆ. ಇದರ ಮಾಲೀಕ ನಿಂಗಪ್ಪ ಹಡಪದ ಡಿಸೆಂಬರ್ 3, 2023 ರಂದು ಬರ್ಬರವಾಗಿ ಕೊಲೆಯಾಗಿದ್ದಾನೆ.
ಮೂಲತ ಹೆಬ್ಬಳ್ಳಿ ಗ್ರಾಮದ ಈ ವ್ಯಕ್ತಿ ಹೆಸರಲ್ಲಿ ಇರೋ ಆಸ್ತಿಯನ್ನು ಕಬಳಿಸಲು ಕೆಲವರು ಹೊಂಚು ಹಾಕಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮರಾಠಾ ಕಾಲೋನಿಯಲ್ಲಿ ನಡೆದಿದ್ದ ನಿಂಗಪ್ಪ ಹಡಪದ ಕೊಲೆ ಹಲವು ಕಾರಣಕ್ಕೆ ಚರ್ಚೆಯಲ್ಲಿದೆ. ನಿಂಗಪ್ಪ ಹಡಪದ ಎಂಬುವವರನ್ನು ಆಸ್ತಿ ವಿಚಾರವಾಗಿ ಕೊಲೆ ಮಾಡಲಾಗಿತ್ತು. ಕೊಲೆಯಾದ ನಿಂಗಪ್ಪ ಹಡಪದ ಅವರ ಅಂತ್ಯಕ್ರೀಯೆ ಮಾಡಲು ಯಾರು ಬರದೇ ಇದ್ದಾಗ ಉಪನಗರ ಠಾಣೆ ಸಿಬ್ಬಂದಿ ಅಂತ್ಯಕ್ರೀಯೆ ಮಾಡಿ ಕೋಟಿ ಕೋಟಿ ಪುಣ್ಯ ಪಡೆದುಕೊಂಡಿತ್ತು.