ಪ್ರಸಿದ್ಧ ಅಮರನಾಥನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಪ್ರಕೃತಿ ಮುನಿಸಿಕೊಂಡಿದ್ದರ ಪರಿಣಾಮ, ಯಾತ್ರಾರ್ಥಿಗಳಿಗೆ ದರ್ಶನ ಭಾಗ್ಯ ಕಷ್ಟವಾಗಿತ್ತಾದರು, ಎರಡನೇ ತಂಡ ಇಂದು ಮುಂಜಾನೆ ಯಾತ್ರೆ ಆರಂಭಿಸಿದೆ.
4434 ಯಾತ್ರಾರ್ಥಿಗಳ ಮತ್ತೊಂದು ತಂಡವು ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದ ಬೇಸ್ ಕ್ಯಾಂಪ್‌ನಿಂದ ಯಾತ್ರೆ ಆರಂಭಿಸಿದೆ. ಕಾಶ್ಮೀರ ಕಣಿವೆಗೆ ಅಮರನಾಥ ಗುಹೆ ದೇಗುಲಕ್ಕೆ ತೀರ್ಥಯಾತ್ರೆಯನ್ನು ಮಾಡಲು ಹೊರಟಿದೆ.
ಭಾರತೀಯ ಸೈನಿಕರು ಯಾತ್ರಿಕರಿಗೆ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುತ್ತಿದ್ದು, ಯಾತ್ರಾರ್ಥಿಗಳು ಇಂದು ಬೆಳಿಗ್ಗೆ ಅಮರನಾಥನ ದರ್ಶನಕ್ಕೆ ಹೊರಟಿದ್ದಾರೆ.