ನಿಮ್ಮ ನೆಚ್ಚಿನ ಕರ್ನಾಟಕ ಫೈಲ್ಸ್ ನಲ್ಲಿ ” ಧಾರವಾಡದಲ್ಲಿದೆ ಡೆಂಗ್ಯೂ ಹಾಟ್ ಸ್ಪಾಟ್ ” ಎಂಬ ಶಿರೋಣಾಮೆಯಡಿ ಪ್ರಕಟವಾಗಿದ್ದ ಸುದ್ದಿ ಪಾಲಿಕೆಯ ಕಣ್ಣು ತೆರೆಸಿದೆ.
ಧಾರವಾಡದ ಹೃದಯಭಾಗದಲ್ಲಿರುವ ಮಾಳಮಡ್ಡಿ ಪ್ರದೇಶದ ಸುತ್ತ, ಚರಂಡಿ ನೀರು ಹರಿದ ಪರಿಣಾಮ, ಅಲ್ಲಿನ ಜನಕ್ಕೆ ಡೆಂಗ್ಯೂ ಭಯ ಕಾಡಿತ್ತು. ಹಲವು ಸಲ ಅಲ್ಲಿನ ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿದ್ದರು ಸಹ ಯಾವದೇ ಪರಿಹಾರ ಸಿಕ್ಕಿರಲಿಲ್ಲ.
ಕರ್ನಾಟಕ ಫೈಲ್ಸ್ ಮಾಳಮಡ್ಡಿಯ ಸಮಸ್ಯೆಗಳ ಬಗ್ಗೆ ವರದಿ ಮಾಡಿ, ಆಡಳಿತದ ಗಮನ ಸೆಳೆದಿತ್ತು. ಇದೀಗ ಮಹಾನಗರ ಪಾಲಿಕೆ ಕಾಮಗಾರಿ ಶುರು ಮಾಡಿದ್ದು, ಮುಚ್ಚಿ ಹೋಗಿದ್ದ ಗಟಾರಗಳನ್ನು ಸ್ವಚ್ಚ ಮಾಡುತ್ತಿದೆ. ಅಲ್ಲದೆ ಹೊಸ ಪೈಪಲೈನ್ ಅಳವಡಿಸಿ, ಡೆಂಗ್ಯೂ ಭಯ ಹೋಗಲಾಡಿಸಿದೆ.