ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ ನಲ್ಲಿ ವಿಕಲಚೇತನರಿಗೆ ಅಪಹಾಸ್ಯ ಮಾಡಿ ವಿಡಿಯೋ ಹರಿಬಿಟ್ಟಿದ್ದಕ್ಕೆ ಭಾರತೀಯ ಮಾಜಿ ಕ್ರಿಕೇಟಪಟುಗಳಾದ ಯುವರಾಜ್ ಸಿಂಗ್, ಹರ್ಭಜನ್ ಮತ್ತು ಸುರೇಶ್ ರೈನಾ ವಿರುದ್ಧ ದೂರು ಧಾಖಲಾಗಿದೆ.
ಅಂಗವಿಕಲರಿಗೆ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್‌ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ದೂರು ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಅಮರ್ ಕಾಲೋನಿ ಪೊಲೀಸ್ ಠಾಣೆ ದೂರು ಸ್ವೀಕರಿಸಿದ್ದು, ಹೆಚ್ಚಿನ ತನಿಖೆಗಾಗಿ ಈ ದೂರನ್ನು ಜಿಲ್ಲೆಯ ಸೈಬರ್ ಸೆಲ್‌ಗೆ ರವಾನಿಸಲಾಗಿದೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಭಾರತ ಚಾಂಪಿಯನ್ಸ್ ಐದು ವಿಕೆಟ್‌ಗಳ ಜಯ ಸಾಧಿಸಿದ ನಂತರ ಮಾಜಿ ಕ್ರಿಕೆಟಿಗರು, ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇದು ವಿಕಲಚೇತನರ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿತ್ತು.