ಧಾರವಾಡದಲ್ಲಿ ಲ್ಯಾಂಡ್ ಆರ್ಮಿ ಅಧಿಕಾರಿಗಳು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾತ್ಮ ಗಾಂಧೀಯನ್ನೇ ಮರೆತಿದ್ದಾರೆ.
ವಾರ್ತಾ ಇಲಾಖೆಯ ಸುಪರ್ಧಿಯಲ್ಲಿ ನಿರ್ಮಾಣವಾಗಬೇಕಿದ್ದ ಗಾಂಧೀ ಭವನದ ಕಾಮಗಾರಿ ಹತ್ತು ವರ್ಷ ಕಳೆದರು ಇನ್ನು ಮುಗಿಯದೇ ಇರುವದು ಸೋಜಿಗ ಮೂಡಿಸಿದೆ.
ಕೇವಲ ಪರ್ಸೆಂಟೇಜ್ ವ್ಯವಹಾರದಲ್ಲಿ ಮಗ್ನರಾಗಿರುವ ಲ್ಯಾಂಡ್ ಆರ್ಮಿ ಅಧಿಕಾರಿಗಳು ಗಾಂಧೀಜಿಯನ್ನು ಮರೆತಿದ್ದು ವಿಪರ್ಯಾಸವೇ ಸರಿ.
ಅಂದ ಹಾಗೆ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಎಲ್ಲ ಜಿಲ್ಲೆಗಳಲ್ಲಿ ಗಾಂಧೀ ಭವನ ನಿರ್ಮಾಣ ಮಾಡಲು ತೀರ್ಮಾನ ಮಾಡಿತ್ತು. ಗಾಂಧೀ ಭವನದ ನಿರ್ಮಾಣದ ಹೊಣೆಯನ್ನು ಲ್ಯಾಂಡ ಆರ್ಮಿಗೆ ವಹಿಸಿತ್ತು.
ಗಾಂಧೀ ಭವನ ನಿರ್ಮಾಣಕ್ಕೆಂದು ಸಿದ್ದರಾಮಯ್ಯ ಸರ್ಕಾರ 2014 ರಲ್ಲಿ ಮೂರು ಕೋಟಿ ಹಣ ಬಿಡುಗಡೆ ಮಾಡಿತ್ತು. ಜಿಲ್ಲಾಡಳಿತ ಹೊಸ ಬಸ್ ನಿಲ್ದಾಣದ ಹಿಂದೆ 29 ಗುಂಟೆ ಜಮೀನು ನೀಡಿತ್ತು. ಅಂದು ಲ್ಯಾಂಡ ಆರ್ಮಿಯ ಇಂಜಿನೀಯರ ಆಗಿದ್ದ ಫರೀದಾ ಎಂಬುವವರು ಕಾಮಗಾರಿ ಆರಂಭ ಮಾಡಿದ್ದರು.
ಫರೀದಾ ವರ್ಗವಾಗಿ ಹೋದ ಮೇಲೆ ಕಟ್ಟಡ ಅಷ್ಟಕ್ಕೆ ನಿಂತಿದೆ. ಗಾಂಧೀಯವರ ಕಂಚಿನ ಮೂರ್ತಿ, ಮತ್ತು ಆಸನ ವ್ಯವಸ್ಥೆ, ವಾಚನಾಲಯದ ಕೆಲಸ ಮಾಡಬೇಕಿದ್ದ ಸಧ್ಯದ ಲ್ಯಾಂಡ ಆರ್ಮಿ ಅಧಿಕಾರಿಗಳು, ತಮಗೂ ಅದಕ್ಕೂ ಸಂಬಂದವೇ ಇಲ್ಲಾ ಅನ್ನೋ ತರ ಸುಮ್ಮನೆ ಕುಳಿತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಮಯ ಬಿಡುವು ಮಾಡಿಕೊಂಡು ಅಲ್ಲಿಗೆ ಭೇಟಿ ನೀಡಿದರೆ, ಕಟ್ಟಡ ಕಾಮಗಾರಿ ತಡವಾಗಲು ಕಾರಣ ಏನು ಅನ್ನೋದು ಬೆಳಕಿಗೆ ಬರುತ್ತದೆ.
ಮುಸ್ತಫಾ ಕುನ್ನಿಭಾವಿ