ಹುಬ್ಬಳ್ಳಿ ಧಾರವಾಡ BRTS ರಸ್ತೆ ಕೇವಲ ಚಿಗರಿ ಬಸ್ಸಿಗೆ ಮಾತ್ರ ಮೀಸಲು. ಸರ್ಕಾರಿ ವಾಹನಗಳನ್ನು ಹೊರತುಪಡಿಸಿದ್ರೆ ಆ ರಸ್ತೆಯಲ್ಲಿ ಖಾಸಗಿ ವಾಹನ ಓಡಾಡುವಂತಿಲ್ಲ. ಒಂದು ವೇಳೆ ಚಿಗರಿ ಬಸ್ಸು ಓಡಾಟಕ್ಕೆ ಮೀಸಲಿದ್ದ ರಸ್ತೆಯಲ್ಲಿ ಖಾಸಗಿ ವಾಹನಗಳು ಓಡಾಡಿದರೆ 500 ರೂಪಾಯಿ ದಂಡ ಫಿಕ್ಸ್.
ಆದರೆ ಬಿಡಾಡಿ ದನಕರುಗಳು ಮಾತ್ರ ಯಾರ ಭಯವಿಲ್ಲದೆ ಸಕತ್ತಾಗಿ ಓಡಾಡುತ್ತಿವೆ. ಹುಬ್ಬಳ್ಳಿಯಿಂದ ಧಾರವಾಡ ನಡುವೆ ಓಡಾಡುವ ಚಿಗರಿ ಬಸ್ಸುಗಳಿಗೆ ಬಿಡಾಡಿ ದನಕರುಗಳು ತೊಂದರೆ ಕೊಡುತ್ತಿವೆ. ರಸ್ತೆ ಮಧ್ಯೆ ಮಲಗುವ ದನಕರುಗಳು ಹಾಯಾಗಿ ಕೆಲಹೊತ್ತು ವಿಶ್ರಾಂತಿ ಪಡೆದು, ಜಾಗ ಖಾಲಿ ಮಾಡುತ್ತವೆ.
ಚಿಗರಿ ಬಸ್ಸುಗಳ ಚಾಲಕರು ದನಕರುಗಳಿಗೆ ತೊಂದರೆ ಕೊಡದೆ ಪಕ್ಕಕ್ಕೆ ಹಾದು ಹೋಗಿ ಪ್ರಾಣಿ ಪ್ರೀತಿ ಮೆರೆಯುತ್ತಿದ್ದಾರೆ.